ರಾಮನಾಗು ರಾವಣನಾದರೆ.. ದರ್ಶನ್ ಅರೆಸ್ಟ್‌ ಆಗ್ತಿದ್ದಂತೆ ಜಗ್ಗೇಶ್ ಯಾಕೆ ಹೀಗಂದ್ರು? ಕಾರಣವೇನು?

author-image
admin
Updated On
ರಾಮನಾಗು ರಾವಣನಾದರೆ.. ದರ್ಶನ್ ಅರೆಸ್ಟ್‌ ಆಗ್ತಿದ್ದಂತೆ ಜಗ್ಗೇಶ್ ಯಾಕೆ ಹೀಗಂದ್ರು? ಕಾರಣವೇನು?
Advertisment
  • ದರ್ಶನ್ ಅರೆಸ್ಟ್ ಆದ ಬಳಿಕ ನವರಸನಾಯಕನ ಮಾರ್ಮಿಕ ಟ್ವೀಟ್
  • ಕರ್ಮ ಜೀವನದ ಹಿಂದೆ ಹಿಂಬಾಲಿಸುತ್ತದೆ ಅವನ ಪಾಪಕರ್ಮ ಸುಡುತ್ತದೆ
  • ದರ್ಶನ್‌ ಅಭಿಮಾನಿಗಳ ಕೋಪಕ್ಕೆ ತುತ್ತಾಗಿದ್ದ ನವರಸನಾಯಕ ಜಗ್ಗೇಶ್

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ನಟ ದರ್ಶನ್ ಅವರನ್ನು ಪೊಲೀಸರು ಬಂಧಿಸಿದ್ದಾರೆ. ದರ್ಶನ್ ಮತ್ತವರ ಗ್ಯಾಂಗ್ ವಿರುದ್ಧ ಅತ್ಯಂತ ಕ್ರೌರ್ಯದ ಆರೋಪ ಕೇಳಿ ಬರುತ್ತಿದೆ. ನಟ ದರ್ಶನ್ ಅರೆಸ್ಟ್ ಕೇಸ್‌ ಇಡೀ ಕನ್ನಡ ಚಿತ್ರರಂಗದಲ್ಲೇ ಸಂಚಲನ ಸೃಷ್ಟಿಸಿದೆ. ದರ್ಶನ್ ಅರೆಸ್ಟ್ ಆದ ಬಳಿಕ ನವರಸನಾಯಕ, ರಾಜ್ಯಸಭಾ ಸದಸ್ಯ ಜಗ್ಗೇಶ್ ಅವರು ಮಾರ್ಮಿಕವಾದ ಟ್ವೀಟ್ ಮಾಡಿದ್ದು ಹೊಸ ಸೆನ್ಸೇಷನ್ ಸೃಷ್ಟಿಸಿದೆ.

publive-image

ಕೊಲೆ ಆರೋಪದಲ್ಲಿ ದರ್ಶನ್ ಅರೆಸ್ಟ್ ಆದ ಬಳಿಕ ನಟ ಜಗ್ಗೇಶ್ ಅವರು ಸೋಷಿಯಲ್ ಮೀಡಿಯಾದಲ್ಲಿ ಒಂದು ಪೋಸ್ಟ್ ಮಾಡಿದ್ದಾರೆ. ಸರ್ವಆತ್ಮಾನೇನಬ್ರಹ್ಮ.. ಅಂದ್ರೆ ಸರ್ವ ಜೀವಿಯಲ್ಲಿ ದೇವರಿದ್ದಾನೆ. ಯಾರನ್ನು ಕೊಲ್ಲುವ ಹಕ್ಕು ಜೀವನಿಗಿಲ್ಲ. ಕರ್ಮ ಜೀವನನ ಹಿಂದೆ ಹಿಂಬಾಲಿಸುತ್ತದೆ. ಅವನ ಪಾಪಕರ್ಮ ಅವನ ಸುಡುತ್ತದೆ. ಕಲಿಯುಗದಲ್ಲಿ ದೇವರು ಕಲ್ಲಲ್ಲ. ಎಲ್ಲಾ ಕರ್ಮಕ್ಕು ತತಕ್ಷಣ ಫಲಿತಾಂಶ ಉಂಟು! ರಾಮನಾಗು ರಾವಣನಾದರೆ ಅಂತ್ಯ ಎಂದಿದೆ ಸನಾತನ ಕೃತಿ! ಮದಕ್ಕೆ ಕಾರುಣ್ಯದ ಅರಿವಿಲ್ಲ ಎಂದು ಸಾಲುಗಳನ್ನ ಜಗ್ಗೇಶ್ ಅವರು ಟ್ವೀಟ್ ಮಾಡಿದ್ದಾರೆ.

ಇದನ್ನೂ ಓದಿ: ಇಟ್ಕೊಂಡವಳು ಇರೋ ತನಕ.. ಕಟ್ಕೊಂಡವಳು ಕಡೇ ತನಕ.. ದರ್ಶನ್​​, ಪವಿತ್ರಾಗೆ ಹಿಡಿ ಶಾಪ ಹಾಕಿದ ತಾಯಿ -Video 

ನಟ ದರ್ಶನ್ ಮೇಲೆ ಕೊಲೆ ಆರೋಪ ಕೇಳಿ ಬಂದ ಬೆನ್ನಲ್ಲೇ ಜಗ್ಗೇಶ್ ಅವರು ಟ್ವೀಟ್ ಮಾಡಿ ಗಮನ ಸೆಳೆದಿದ್ದಾರೆ. ಜಗ್ಗೇಶ್ ಅವರ ಟ್ವೀಟ್‌ನಲ್ಲಿ ಮಾರ್ಮಿಕವಾದ ಅರ್ಥಗಳಿದ್ದು, ಯಾರನ್ನೂ ಕೊಲ್ಲುವ ಹಕ್ಕು ಯಾರಿಗೂ ಇಲ್ಲ. ಕಲಿಯುಗದಲ್ಲಿ ಕರ್ಮಕ್ಕೆ ತತಕ್ಷಣ ಫಲಿತಾಂಶ ಸಿಗುತ್ತೆ. ಅವನ ಪಾಪ ಕರ್ಮ ಅವನ ಸುಡುತ್ತದೆ ಎಂದು ಕುಟುಕಿದ್ದಾರೆ. ಸದ್ಯ ಜಗ್ಗೇಶ್ ಅವರ ಈ ಮಾತುಗಳು ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.


">June 11, 2024

ಇದನ್ನೂ ಓದಿ:ಚಾಲೆಂಜಿಂಗ್ ಸ್ಟಾರ್ ದರ್ಶನ್​​ ತನಿಖೆ ಹೆಂಗಿರುತ್ತೆ..? ಆ ಆರು ದಿನಗಳಲ್ಲಿ ರೋಚಕ ಟ್ವಿಸ್ಟ್​..!

ದರ್ಶನ್, ಜಗ್ಗೇಶ್ ನಡುವೆ ಮುನಿಸು ಯಾಕೆ?
ನಟ ದರ್ಶನ್ ಹಾಗೂ ಜಗ್ಗೇಶ್ ಅವರ ಮಧ್ಯೆ ವಿವಾದ ಇದೇ ಮೊದಲಲ್ಲ. ಈ ಹಿಂದೆ ಜಗ್ಗೇಶ್ ಮಾತನಾಡುವಾಗ ದರ್ಶನ್ ಹೆಸರನ್ನು ಪ್ರಸ್ತಾಪ ಮಾಡಿದ್ದರು. ದರ್ಶನ್ ಹೆಸರು ಪ್ರಸ್ತಾಪ ಮಾಡಿದ್ದಕ್ಕೆ ದರ್ಶನ್ ಫ್ಯಾನ್ಸ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು.

publive-image

ದರ್ಶನ್ ಅಭಿಮಾನಿಗಳು ಜಗ್ಗೇಶ್ ಅಭಿನಯದ ತೋತಾಪುರಿ ಶೂಟಿಂಗ್ ಸ್ಪಾಟ್‌ಗೆ ತೆರಳಿ ಗಲಾಟೆ ಮಾಡಿದ್ದರು. ದರ್ಶನ್ ಅವರ ಕ್ಷಮೆ ಕೇಳುವಂತೆ ಜಗ್ಗೇಶ್ ಅವರ ಬಳಿ ಫ್ಯಾನ್ಸ್‌ ಪಟ್ಟು ಹಿಡಿದಿದ್ದರು. ಇದಾದ ಮೇಲೆ ಜಗ್ಗೇಶ್ ಅವರು ದರ್ಶನ್ ಬಗ್ಗೆ ಕೆಟ್ಟದಾಗಿ ಮಾತನಾಡಿಲ್ಲವೆಂದು ಸ್ಪಷ್ಟನೆ ನೀಡಿದ್ದರು. ಇದಾದ ಮೇಲೆ ದರ್ಶನ್ ಅವರು ಸಂದರ್ಶನದಲ್ಲಿ ಕ್ಷಮೆಯಾಚಿಸಿದ್ದರು. ಈ ಘಟನೆಯ ನಂತರ ಜಗ್ಗೇಶ್ ಅವರು ನಟ ದರ್ಶನ್‌ ಅವರಿಂದ ಸಂಪೂರ್ಣವಾಗಿ ಅಂತರ ಕಾಯ್ದುಕೊಂಡಿದ್ದರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment